page
ಅಜ್ಜಿಯ ಪ್ರೀತಿ
ನನ್ನ ಬಾಲ್ಯದ ಮೊದಲ ಹಾಡು, ಅಜ್ಜಿಯ ಮುದ್ದು ಮಾತು… ನನ್ನ ಕಣ್ಣೀರಿನ ಮೊದಲ ಒರೆಸು, ಅಜ್ಜಿಯ ಪ್ರೀತಿಯ ಕೈಯದು… ❤️
ನಾನು ನಗಲು ನೀನು ನಕ್ಕೆ, ನಾನು ಅಳಲು ನೀನು ಅತ್ತೆ, ನನ್ನ ಪುಟ್ಟ ಕನಸುಗಳಿಗೂ ನೀನೇ ರೆಕ್ಕೆ ಕೊಟ್ಟೆ…
ಅಜ್ಜಿ… ಅಜ್ಜಿ… ನೀನೇ ನನ್ನ ಪ್ರೀತಿಯ ನೆರಳು, ಜೀವನದ ದಾರಿಯಲಿ ನೀನೇ ನನ್ನ ಬೆಳಕು… 🌷
ನಿನ್ನ ಮಡಿಲ ನೆನಪಾದಾಗ ಮನಸು ಮತ್ತೆ ಮಗುವಾಗುತ್ತದೆ, ನಿನ್ನ ಪ್ರೀತಿ ನೆನಪಾದಾಗ ಕಣ್ಣಂಚಿನಲ್ಲಿ ನೀರು ತುಂಬುತ್ತದೆ…
ನೀ ದೂರವಿದ್ದರೂ ಅಜ್ಜಿ, ನಿನ್ನ ಪ್ರೀತಿ ನನ್ನ ಜೊತೆ… ನನ್ನ ಕೊನೆಯ ಉಸಿರಿನವರೆಗೂ ನಿನ್ನ ನೆನಪು ನನ್ನ ಹೃದಯದೊಳಗೆ… ❤️🎶