page
ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗು ಆಯುರ್ವೇದ ಜಾಗೃತಿ ಶಿಬಿರ
ರಾಜರಾಜೇಶ್ವರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಪಿ ಜಿ ಸೆಂಟರ್ ಹಾಗು ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗು ಆಯುರ್ವೇದ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಜ್ಞ ವೈದ್ಯರಿಂದ ತಪಾಸಣೆ, ಉಚಿತ ರಕ್ತದೋತ್ತಡ, ಮಧುಮೇಹ ತಪಾಸಣೆ ಹಾಗೂ ಉಚಿತ ಔಷಧಿಗಳನ್ನು ವಿತರಿಸಲಾಗುವುದು.
ದಿನಾಂಕ
21 ಸೆಪ್ಟೆಂಬರ್ 2026 (ಸೋಮವಾರ)Copy
ಸಮಯ
ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆ ವರೆಗೆCopy
ಸ್ಥಳ
ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣ, ತಾಳಮಡಗಿ
ಆಯೋಜಕರು
ರಾಜರಾಜೇಶ್ವರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಪಿ ಜಿ ಸೆಂಟರ್ ಹಾಗು ಆಸ್ಪತ್ರೆ NH-65, ವೀರಭದ್ರಗಿರಿ ಸಿಂದೇನಕೇರಾ ಹುಮ್ನಾಬಾದ್Copy
ಲಭ್ಯವಿರುವ ಚಿಕಿತ್ಸೆಗಳು ಹಾಗೂ ತಪಾಸನೆಗಳು
ಕೀಲು ನೋವು, ಮಂಡಿ ನೋವು, ಸೊಂಟ ನೋವು, ಕತ್ತು ನೋವು, ಪಾರ್ಶ್ಶ್ವವಾಯು, ನರರೋಗಗಳು, ಕೆಮ್ಮು, ದಮ್ಮು, ಉಬ್ಬಸ, ಡಸ್ಟ್ ಅಲರ್ಜಿ, ಮೂಲವ್ಯಾದಿ, ವೆರಿಕೋಸ್ ವೇನ್ಸ್, ಅಳಿ, ಕುರುಪ, ಮಹಿಳೆಯರಲ್ಲಿನ ಮುಟ್ಟಿನ ತೊಂದರೆಗಳು, ಬಂಜೆತನ, ಕಿವಿ ಮೂಗು ಗಂಟಲಿನ ಸಮಸ್ಯೆಗಳು, ಆಸಿಡಿಟಿ, ಕಾಮಾಲೆ, ಕಿಡ್ನಿಯಲ್ಲಿನ ಪಿತ್ತಕೋಷದಲ್ಲಿನ ಹರಳುಗಳು, ಥೈರಾಯಿಡ್, ಮಕ್ಕಳಲ್ಲಿನ ಕುಂಠಿತ ಬೆಳವಣಿಗೆ ಹಾಗೂ ಇತರೆ ರೋಗಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತದೆ.